ದಾವಣಗೆರೆಯಲ್ಲಿ ಕಾರು ಬೈಕ್  ನಡುವೆ ಭೀಕರ ಡಿಕ್ಕಿ .

ದಾವಣಗೆರೆಯಲ್ಲಿ ಕಾರು ಬೈಕ್  ನಡುವೆ ಭೀಕರ ಡಿಕ್ಕಿ . ಇಬ್ಬರು ಸಾವು ಒಬ್ಬನಿಗೆ ಗಂಭೀರ ಗಾಯ

ದಾವಣಗೆರೆಯಲ್ಲಿ ಕಾರು ಬೈಕ್  ನಡುವೆ ಭೀಕರ ಡಿಕ್ಕಿ . ಇಬ್ಬರು ಸಾವು ಒಬ್ಬನಿಗೆ ಗಂಭೀರ ಗಾಯ

ದಾವಣಗೆರೆ .ಜಿಲ್ಲೆಯ ಹರಿಹರ ತಾಲೂಕಿನ ಕಡರನಾಯ್ಕನಹಳ್ಳಿ ಬಳಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವತಿಯರು ದುರ್ಮರಣಕ್ಕೀಡಾಗಿದ್ದಾರೆ. ಕಾರು ಮತ್ತು ಬೈಕ್ ನಡುವಿನ ಡಿಕ್ಕಿಯಿಂದ ಈ ದುರ್ಘಟನೆ ಸಂಭವಿಸಿದ್ದು, ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ದಾವಣಗೆರೆಯಲ್ಲಿ ಕಾರು ಬೈಕ್  ನಡುವೆ ಭೀಕರ ಡಿಕ್ಕಿ . ಇಬ್ಬರು ಸಾವು ಒಬ್ಬನಿಗೆ ಗಂಭೀರ ಗಾಯ
ದಾವಣಗೆರೆಯಲ್ಲಿ ಕಾರು ಬೈಕ್  ನಡುವೆ ಭೀಕರ ಡಿಕ್ಕಿ . ಇಬ್ಬರು ಸಾವು ಒಬ್ಬನಿಗೆ ಗಂಭೀರ ಗಾಯ

ಮೃತ ಯುವತಿಯರನ್ನು ಕಡರನಾಯ್ಕನಹಳ್ಳಿ ಗ್ರಾಮದ ಪಲ್ಲವಿ (26) ಮತ್ತು ಹೊಳೆ ಸಿರಿಗೆರೆ ಗ್ರಾಮದ ಸುಮಾ (26) ಎಂದು ಗುರುತಿಸಲಾಗಿದೆ. ಈ ಇಬ್ಬರ ಜೊತೆಗೆ ಸಚಿನ್ ಎಂಬ ಯುವಕನೂ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ. ಕಡರನಾಯ್ಕನಹಳ್ಳಿ ಬಳಿಯ ರಸ್ತೆಯಲ್ಲಿ ಇವರ ಬೈಕ್‌ಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಘಟನೆಯ ತೀವ್ರತೆಯಿಂದ ಬೈಕ್‌ನಲ್ಲಿದ್ದ ಮೂವರೂ ರಸ್ತೆಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ದಾರಿಮಧ್ಯೆಯೇ ಪಲ್ಲವಿ ಮತ್ತು ಸುಮಾ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಸಚಿನ್‌ನನ್ನು ದಾವಣಗೆರೆಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಈ ದುರ್ಘಟನೆಯ ಸಂಬಂಧ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಕಾರಿನ ಚಾಲಕನ ವಿರುದ್ಧ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಕಾರಿನ ಅತಿಯಾದ ವೇಗವೇ ಈ ದುರ್ಘಟನೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2025ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಸಿನಿಮಾ, ಕ್ರೀಡೆ ಸೇರಿದಂತೆ ಎಲ್ಲ ವಿಭಾಗದ ಸುದ್ದಿಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ, ಡಿಪ್ಲೋಮಾ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿಯಿದೆ.

Leave a Reply

Your email address will not be published. Required fields are marked *