ಷೇರು, ಟ್ರೇಡಿಂಗ್ ಬಿಟ್ಟು ಎಸ್‌ಐಪಿ ಮೊರೆಹೋದ ಜನ;

 

ಷೇರು, ಟ್ರೇಡಿಂಗ್ ಬಿಟ್ಟು SIP ಮೊರೆಹೋದ ಜನ; ತಿಂಗಳಲ್ಲಿ 26,632 ಕೋಟಿ ರೂ. ಹೂಡಿಕೆ

ಷೇರು, ಟ್ರೇಡಿಂಗ್ ಬಿಟ್ಟು ಎಸ್‌ಐಪಿ ಮೊರೆಹೋದ ಜನ;
ಷೇರು, ಟ್ರೇಡಿಂಗ್ ಬಿಟ್ಟು sip  ಮೊರೆಹೋದ ಜನ;

ಜಾಗತಿಕ ಭೌಗೋಳಿಕ ಸಂಘರ್ಷ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆಯನ್ನು ವಾಪಸ್ ತೆಗೆದುಕೊಳ್ಳುತ್ತಿರುವುದು, ಭಾರತ-ಪಾಕ್ ಸಂಘರ್ಷ ಸೇರಿ ಹಲವು ಕಾರಣಗಳಿಂದಾಗಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಇದೆ. ಇದೇ ಕಾರಣದಿಂದಾಗಿ ಜನ ಮ್ಯೂಚುವಲ್ ಫಂಡ್ ಎಸ್‌ಐಪಿಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

ಇದಕ್ಕೆ ನಿದರ್ಶನ ಎಂಬಂತೆ, ಕಳೆದ ಏಪ್ರಿಲ್ ತಿಂಗಳಲ್ಲಿ ದೇಶಾದ್ಯಂತ ದಾಖಲೆಯ 26,632 ಕೋಟಿ ರೂಪಾಯಿಯನ್ನು ಎಸ್‌ಐಪಿಯನ್ನು ಹೂಡಿಕೆ ಮಾಡಲಾಗಿದೆ. ಇದು ಸಾರ್ವಕಾಲಿಕ ದಾಖಲೆಯೂ ಆಗಿದೆ.

ಹೌದು, ಎಎಂಎಫ್‌ಐ ಸಂಸ್ಥೆಯು ಏಪ್ರಿಲ್ ತಿಂಗಳಲ್ಲಿ ಹೂಡಿಕೆ ಮಾಡಲಾದ ಎಸ್‌ಐಪಿ ಕುರಿತು ಡೇಟಾ ಬಿಡುಗಡೆ ಮಾಡಿದೆ. ಅದರಂತೆ, ಕಳೆದ ತಿಂಗಳಲ್ಲಿ 46 ಲಕ್ಷ ಹೊಸ ಎಸ್‌ಐಪಿ ಖಾತೆಗಳನ್ನು ತೆರೆಯಲಾಗಿದೆ. ಇದರೊಂದಿಗೆ ಒಂದೇ ತಿಂಗಳಲ್ಲಿ 26,632 ಕೋಟಿ ರೂಪಾಯಿಯನ್ನು ಎಸ್‌ಐಪಿಯಲ್ಲಿ ಹೂಡಿಕೆ ಮಾಡಲಾಗಿದೆ. ಆ ಮೂಲಕ ದೇಶದಲ್ಲಿರುವ ಎಸ್‌ಐಪಿ ಖಾತೆಗಳ ಸಂಖ್ಯೆಯು 8 ಕೋಟಿ ದಾಟಿದೆ.

ಏಪ್ರಿಲ್ ನಲ್ಲಿ 1.3 ಕೋಟಿ ನಿಷ್ಕ್ರಿಯ ಖಾತೆಗಳನ್ನು ಕ್ಲೋಸ್ ಮಾಡಿದರೂ, ಎಸ್‌ಐಪಿ ಮೂಲಕ ₹26,632 ಕೋಟಿ ಸಂಗ್ರಹವಾಗಿದೆ. ಇದು ಭಾರತೀಯ ಹೂಡಿಕೆದಾರರ ಆರ್ಥಿಕ ಶಿಸ್ತು ಮತ್ತು ಪ್ರಬುದ್ಧತೆಯನ್ನು ತೋರಿಸುತ್ತದೆ. ಒಂದೇ ತಿಂಗಳಲ್ಲಿ 46 ಲಕ್ಷ ಹೊಸ ಖಾತೆಗಳನ್ನು ತೆರೆಯಲಾಗಿದೆ. ಈಕ್ವಿಟಿ ಒಳಹರಿವು ಕಡಿಮೆಯಾದರೂ, ಮ್ಯೂಚುವಲ್ ಫಂಡ್ ಉದ್ಯಮವು ಒಟ್ಟಾರೆಯಾಗಿ ಬೆಳವಣಿಗೆ ಕಂಡಿದೆ.

ಒಟ್ಟಾರೆಯಾಗಿ ಮ್ಯೂಚುವಲ್ ಫಂಡ್ ನಿರ್ವಹಣೆಯ ಅಡಿಯಲ್ಲಿರುವ ಸ್ವತ್ತುಗಳ ಮೌಲ್ಯ 70 ಲಕ್ಷ ಕೋಟಿ ರೂ.ಗೆ ತಲುಪಿದೆ. ಇದು ಗಮನಾರ್ಹ ಬೆಳವಣಿಗೆಯಾಗಿದೆ. ಕಳೆದ ಮಾರ್ಚ್ ನಲ್ಲಿ ಷೇರು ಮಾರುಕಟ್ಟೆಯಲ್ಲಿ ಭಾರಿ ತಲ್ಲಣ ಉಂಟಾಗಿದ್ದ ಕಾರಣ ಹೆಚ್ಚಿನ ಜನ ಮ್ಯೂಚುವಲ್ ಫಂಡ್ ಎಸ್‌ಐಪಿ ಖಾತೆಗಳನ್ನು ಕ್ಲೋಸ್ ಮಾಡಿದ್ದರು. ಈಗ ಮತ್ತೆ ಜನ ಎಸ್‌ಐಪಿ ಹೂಡಿಕೆಯತ್ತ ಆಕರ್ಷಿತರಾಗುತ್ತಿದ್ದಾರೆ.

ಗಮನಿಸಿ: ಮ್ಯೂಚುವಲ್ ಫಂಡ್ ಎಸ್‌ಐಪಿಗಳು ಕೂಡ ಮಾರುಕಟ್ಟೆಯ ಆಧಾರಿತವಾಗಿ ಏರಿಳಿತಗಳನ್ನು ಹೊಂದಿರುತ್ತವೆ. ಇವು ಕೂಡ ರಿಸ್ಕ್ ಹೊಂದಿರುತ್ತವೆ. ಮಾಹಿತಿ ದೃಷ್ಟಿಯಿಂದ ಮಾತ್ರ ಸುದ್ದಿಯನ್ನು ಪ್ರಕಟಿಸಲಾಗಿದೆ. ಹೂಡಿಕೆ ಮಾಡುವ ಮುನ್ನತಜ್ಞರ ಸಲಹೆ-ಸೂಚನೆಗಳನ್ನು ಪಡೆಯುವುದು ಕಡ್ಡಾಯವಾಗಿದೆ.

 

Leave a Reply

Your email address will not be published. Required fields are marked *